Indian air force recruitment 2021 - ಭಾರತೀಯ ವಾಯುಪಡೆ ನೇಮಕಾತಿ

Posted by Vidhyarthimitra on

 Indian air force recruitment 2021 - ಭಾರತೀಯ ವಾಯುಪಡೆ ನೇಮಕಾತಿ SSLC Degree ಆದವರು ಅರ್ಜಿ ಸಲ್ಲಿಸಿ.


 Indian air force recruitment 2021

ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗೌಂಡ್ ಡ್ಯೂಟಿ (ಟೆಕ್ನಿಕಲ್ ಮತ್ತು ನಾನ್‌ಟೆಕ್ನಿಕಲ್) ವಿಭಾಗದಲ್ಲಿ ಕಮಿಷನ್ ಆಫೀಸರ್ ಹುದ್ದೆಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

2023ರ ಜನವರಿಯಲ್ಲಿ ಆರಂಭಿಸುತ್ತಿರುವ ಹೊಸ ಕೋರ್ಸ್‌ಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಶಾರ್ಟ್ ಸರ್ವಿಸ್ ಕಮಿಷನ್ (SASC) ಮತ್ತು ಪರ್ಮನೆಂಟ್ ಕಮಿಷನ್ (PC) ವಿಭಾಗದ ಏರ್‌ಪೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್ (AFCIT) ಎಂಟ್ರಿ ಮತ್ತು ಎನ್ ಸಿಸಿ ಸ್ಪೆಷಲ್ ಎಂಟ್ರಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪರ್ಮನೆಂಟ್ ಕಮಿಷನ್ ಅಧಿಕಾರಿ ಹುದ್ದೆಗೆ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಎಸ್‌ಎಸ್‌ ಅಧಿಕಾರಿ ಹುದ್ದೆಗೆ ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ದೇಹದಲ್ಲಿ ಟ್ಯಾಟೂ ಇರಬಾರದು ಎಂದು ತಿಳಿಸಲಾಗಿದೆ.

Age relaxation of air force recruitment 2021

ವಯೋಮಿತಿ: 1-1-2023ಕ್ಕೆ ಅನ್ವಯವಾಗುವಂತೆ ಫೈಯಿಂಗ್ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ರಿಂದ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 1999ರ ಜ.2 ಹಾಗೂ 2003ರ ಜ.1ರ ನಡುವೆ ಜನಿಸಿರಬೇಕು. ಗೌಂಡ್ ಡ್ಯೂಟಿ (ಟೆಕ್ನಿಕಲ್ ನಾನ್-ಟೆಕ್ನಿಕಲ್ ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ರಿಂದ 26 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 1997ರ ಜ.2ರಿಂದ 2003ರ ಜ.1ರ ನಡುವೆ ಆರಿಸಿರಬೇಕು.

Training information of airforce recruitment 2021

2023 ರ ಜನವರಿ ಮೊದಲ ವಾರದಲ್ಲಿ ತರಬೇತಿ ಆರಂಭವಾಗಲಿದ್ದು, ಹೈದರಾಬಾದ್ ಡುಂಡಿಗಲ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ನಡೆಯಲಿದೆ.

Download notification air force recruitment 2021

Appky online for air force recruitment 2021


Previous
« Prev Post

4 comments: