Home Guards Recruitment - Apply now

Posted by Vidhyarthimitra on

Karnataka Home Guards Recruitment - Apply now ಗೃಹರಕ್ಷಕ ದಳ ನೇಮಕಾತಿ 


ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ Click here

ಕರ್ನಾಟಕ ಗೃಹರಕ್ಷಕ ದಳ ಚಿತ್ರದುರ್ಗ ಇಲ್ಲಿ ಖಾಲಿ ಇರುವ 75 ಹೋಮ್ ಗರ್ಡ್ಸ್ ಹುದ್ದೆಗಳುಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮುಂದಿನ ಡಿಸೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ

ಅರ್ಜಿಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳೊಂದಿಗೆ

ಸಮಾದೇಷ್ಟರು, ಗೃಹರಕ್ಷಕ ದಳ ಕಚೇರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇಲ್ಲಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಹತೆಗಳು

  1.  ವಯಸ್ಸು: ಕನಿಷ್ಠ 19 ರಿಂದ 45 ವರ್ಷ ಒಳಗಿನವರಿರಬೇಕು.
  2.  ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.
  3.  ಗೃಹರಕ್ಷಕ ಸದಸ್ಯತ್ವಕ್ಕೆ ಸೇರಬಯಸುವ ಅಭ್ಯರ್ಥಿಗಳು ನಿರ್ದಿಷ್ಟ ಪ್ರದೇಶದ ಗರಿಷ್ಟ 5 ಕಿ.ಮೀ ಒಳಗಿನವರಾಗಿರಬೇಕು.  ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು.
  4. ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು.
  5.  ಉತ್ತಮ ದೇಹದಾರ್ಡ್ಯತೆಯನ್ನು ಹೊಂದಿರಬೇಕು. 
  6.  ಪುರುಷರು 168 ಸೆಂ.ಮೀ ಎತ್ತರ, 50 ಕೆ.ಜಿ ತೂಕ ಇರಬೇಕು. ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. 
  7.  ಸ್ವಯಂ ಸೇವಾ ಮನೋಭಾವದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

Important:

ಅರ್ಜಿ ವಿತರಣೆ ಸ್ಥಳ ಜಿಲ್ಲಾ ಗೃಹರಕ್ಷಕ ದಳ ಕಚೇರಿ, ಮೆದೇಹಳ್ಳಿ ರಸ್ತೆ, ಚಿತ್ರದುರ್ಗ ಇಲ್ಲಿ ಅರ್ಜಿಗಳು ದೊರೆಯಲಿದ್ದು, 

ನವೆಂಬರ್ 25ರಿಂದ ಡಿಸೆಂಬರ್ 6ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು,

 ಡಿಸೆಂಬರ್ 10, ಸಂಜೆ 5.30 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

Previous
« Prev Post

1 comment: