FDA ತಪ್ಪು ಕಿ ಉತ್ತರ: KPSC ವಿರುದ್ಧ KAT ಮೊರೆ ಹೋದ ಅಭ್ಯರ್ಥಿಗಳು
PSI PC FDA SDA test series visit here Mock tests
ಪ್ರಥಮ ದರ್ಜೆ ಸಹಾಯಕ (𝐅𝐃𝐀) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ತಪ್ಪು ಕೀ ಉತ್ತರಗಳಿಗೆ ಸಂಬಂಧಿಸಿದಂತೆ 𝐊𝐏𝐒𝐂 ಅಭ್ಯರ್ಥಿಗಳ ಮನವಿಯನ್ನು ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಉದ್ಯೋಗಾಕಾಂಕ್ಷಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ 𝐊𝐀𝐓 ಮೊರೆ ಹೋಗಿದ್ದಾರೆ.
ರಾಜ್ಯದಾದ್ಯಂತ ಖಾಲಿಯಿರುವ 𝟏,𝟏𝟎𝟕 ಹುದ್ದೆಗಳಿಗೆ ಫೆಬ್ರುವರಿ 𝟐𝟖 ರಂದು 𝐊𝐏𝐒𝐂 ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಮಾರ್ಚ್ 𝟑 ರಂದು ಕೀ ಉತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಿತ್ತು.
ಕೀ ಉತ್ತರಗಳಲ್ಲಿ ಹಲವಾರು ತಪ್ಪುಗಳಿರುವ ಕುರಿತು ಅಭ್ಯರ್ಥಿಗಳು ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆಗಳನ್ನು ಪರಿಶೀಲಿಸಿ ಏಪ್ರಿಲ್ 𝟖 ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿತ್ತು.
- PSI PC FDA SDA notes available for free Download
ಆದರೆ, ಪರಿಷ್ಕೃತ ಉತ್ತರಗಳಲ್ಲಿಯೂ ತಪ್ಪುಗಳಿರುವುದು ಕಂಡುಬಂದಿರುವುದು ಉದ್ಯೋಗಾಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದೊಂದು ಅಂಕವೂ ಅಮೂಲ್ಯವಾಗಿದ್ದು, ಯಾವುದೇ ಗೊಂದಲಗಳು ಇಲ್ಲದಿದ್ದರೂ ಆಯೋಗ ಸರಿಯಾದ ಉತ್ತರಗಳನ್ನು ನೀಡದೆ ತಪ್ಪು ಉತ್ತರಗಳನ್ನು ನೀಡಿದೆ. ಹಿಂದೆ ಆಯೋಗದಿಂದ ನಡೆಸಿದ ಪರೀಕ್ಷೆಗಳಲ್ಲಿ ಸರಿ ಉತ್ತರಗಳನ್ನು ಈ ಬಾರಿ ಅವರೇ ತಪ್ಪು ಉತ್ತರ ಎಂದು ನೀಡಿದ್ದು, ಒಂದು ಪರೀಕ್ಷೆಗೂ ಇನ್ನೊಂದು ಪರೀಕ್ಷೆಗೂ ಉತ್ತರಗಳು ಬದಲಾಗಲು ಹೇಗೆ ಸಾಧ್ಯ??? ಎಂಬುದು ಆಕಾಂಕ್ಷಿಗಳ ಪ್ರಶ್ನೆಯಾಗಿದೆ.
- PSI top Questions and answers Download
- Previous years KAS, PSI, PDO, FDA, SDA, TET exam questions papers available here Download
ರಾಜ್ಯದಾದ್ಯಂತ ಖಾಲಿಯಿರುವ 𝟭,𝟭𝟬𝟳 ಹುದ್ದೆಗಳಿಗೆ ಫೆಬ್ರುವರಿ 𝟮𝟴ರಂದು 𝗞𝗣𝗦𝗖 ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಮಾರ್ಚ್ 𝟯 ರಂದು ಕೀ ಉತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿತ್ತು.
ಕೀ ಉತ್ತರಗಳಲ್ಲಿ ಹಲವಾರು ತಪ್ಪುಗಳಿರುವ ಕುರಿತು ಅಭ್ಯರ್ಥಿಗಳು ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆಗಳನ್ನು ಪರಿಶೀಲಿಸಿ ಏಪ್ರಿಲ್ 𝟴 ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಆದರೆ, ಪರಿಷ್ಕೃತ ಉತ್ತರಗಳಲ್ಲಿಯೂ ತಪ್ಪುಗಳಿರುವುದು ಕಂಡುಬಂದಿರುವುದು ಉದ್ಯೋಗಾಕಾಂಕ್ಷಿಗಳ ಬೇಸರಕ್ಕೆ ಕಾರಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದೊಂದು ಅಂಕವೂ ಅಮೂಲ್ಯವಾಗಿದ್ದು, ಯಾವುದೇ ಗೊಂದಲಗಳು ಇಲ್ಲದಿದ್ದರೂ ಆಯೋಗ ಸರಿಯಾದ ಉತ್ತರಗಳನ್ನು ನೀಡದೆ ತಪ್ಪು ಉತ್ತರಗಳನ್ನು ನೀಡಿದೆ. ಹಿಂದೆ ಆಯೋಗದಿಂದ ನಡೆಸಿದ ಪರೀಕ್ಷೆಗಳಲ್ಲಿ ಸರಿ ಉತ್ತರಗಳನ್ನು ಈ ಬಾರಿ ಅವರೇ ತಪ್ಪು ಉತ್ತರ ಎಂದು ನೀಡಿದ್ದು, ಒಂದು ಪರೀಕ್ಷೆಗೂ ಇನ್ನೊಂದು ಪರೀಕ್ಷೆಗೂ ಉತ್ತರಗಳು ಬದಲಾಗಲು ಹೇಗೆ ಸಾಧ್ಯ??? ಎಂಬುದು ಆಕಾಂಕ್ಷಿಗಳ ಪ್ರಶ್ನೆಯಾಗಿದೆ.
ಆಯೋಗ ಪ್ರಕಟಿಸಿರುವ ತಪ್ಪು ಉತ್ತರಗಳ ಕುರಿತು ಸ್ಪಷ್ಟೀಕರಣ ನೀಡಿರುವ ಆಯೋಗವು ಮತ್ತೊಮ್ಮೆ ಕೀ ಉತ್ತರಗಳನ್ನು ಬದಲಾಯಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿಳಿಸಿದೆ. ಆದರೆ, 𝟐𝟎𝟐𝟎ರ ಕೆಎಎಸ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಮರು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಆ ಸಮಯದಲ್ಲಿದ್ದ ನಿಯಮ ಈಗ ಮಾತ್ರ ಹೇಗೆ ಬದಲಾಗುತ್ತದೆ' ಎಂದು KAT ಮೊರೆ ಹೋದ ಆಕಾಂಕ್ಷಿ ಪ್ರಶ್ನಿಸಿದ್ದಾರೆ.
- Download 100+ GK FDA SDA PDO TET PSI KAS model question papers here Download
- Recent government jobs Apply online here Click here
ಸಾಕಷ್ಟು ಬಡ ವಿದ್ಯಾರ್ಥಿಗಳು ಎರಡು ಮೂರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಸರಕಾರವೇ ಮುದ್ರಣ ಮಾಡಿರುವ ಪುಸ್ತಕಗಳಲ್ಲಿ ಇರುವಂತಹ ಉತ್ತರಗಳೇ ತಪ್ಪು ಎಂದು ಆಯೋಗ ಹೇಳುತ್ತಿದ್ದು, ತಜ್ಞರು ನೀಡಿರುವ ಉತ್ತರಗಳು ಯಾವ ಆಧಾರದ ಮೇಲೆ ಸರಿ ಎಂಬುದಕ್ಕೆ ಆಯೋಗ ದಾಖಲೆಗಳನ್ನು ಆಕಾಂಕ್ಷಿಗಳಿಗೆ ನೀಡಲಿ ಎಂದು ಒತ್ತಾಯಿಸಿದ್ದಾರೆ
No comments:
Post a Comment