Current affairs June 4,5,6,7 ಪ್ರಚಲಿತ ಘಟನೆಗಳು

Posted by Vidhyarthimitra on

 

Current affairs June 4,5,6,7 2021 ಪ್ರಚಲಿತ ಘಟನೆಗಳು




 1 Month full current affairs Click here


01)  ಯಾವ ಮಹಿಳೆ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್’ಶಿಪ್ ನ 75 ಕೆ.ಜಿ. ವಿಭಾಗದಲ್ಲಿ ಬಂಗಾರದ ಪದಕ ಜಯಸಿದ್ದಾರೆ?


A)  ಪೂಜಾ ರಾಣಿ

B)  ಲಾಲ್ ಬೌತ್ಸಾಹಿ

C)  ಕರಣಂ ಮಲ್ಲೇಶ್ವರಿ

D)  ಮೇರಿ ಕೋಮ್


👉 ಉತ್ತರ: A)  ಪೂಜಾ ರಾಣಿ


02)  “ಬೆಲ್’ಗ್ರೇಡ್ ಓಪನ್ ಟೆನಿಸ್ ಪ್ರಶಸ್ತಿ”ಯನ್ನು ಈ ಕೆಳಗಿನ ಯಾವ ಆಟಗಾರ ಗೆದ್ದುಕೊಂಡಿದ್ದಾರೆ?


A)  ನವೊಮಿ ಒಸಾಕ

B)  ಝಾಂಗ್ ಹೊಂಗ್

C)  ನೊವಾಕ್ ಜೊಕೋವಿಕ್

D)  ಮಾಲ್ ಕ್ಯಾನ್


👉 ಉತ್ತರ: C)  ನೊವಾಕ್ ಜೊಕೋವಿಕ್


03)  “ಮುಖ್ಯಮಂತ್ರಿ ಅನಾಥ ಆಧಾರ ಯೋಜನೆ”ಯನ್ನು ಈ ಕೆಳಗಿನ ಯಾವ ರಾಜ್ಯವು ಆರಂಭಿಸುತ್ತದೆ?


A)  ಕರ್ನಾಟಕ

B)  ಗೋವಾ

C)  ಆಂಧ್ರ ಪ್ರದೇಶ

D)  ತೆಲಂಗಾಣ


👉 ಉತ್ತರ: B)  ಗೋವಾ


04)  ಇತ್ತೀಚಿಗೆ ಜಗತ್ತಿನ ಅತಿ ಎತ್ತರದ ಪರ್ವತ ಶಿಖರವಾಗಿರುವ ಮೌಂಟ್ ಎವರೆಸ್ಟ್ ಅನ್ನು ಏರಿದ ಚೀನಾ ದೇಶದ ಅಂಧ ವ್ಯಕ್ತಿ ಯಾರು?


A)  ಗುವೋ ಅಂಡ್ ಮ

B)  ಜ್ಹಂಗ್ ವೆಯ್

C)  ಹುಯೆನ್ಗ್ ಜ್ಹೌ

D)  ಝಾಂಗ್ ಹೊಂಗ್


👉 ಉತ್ತರ: D)  ಝಾಂಗ್ ಹೊಂಗ್


05)  ಇತ್ತೀಚಿಗೆ ಚೀನಾ ದೇಶದಲ್ಲಿ ಪತ್ತೆಯಾಗಿರುವ ಹಕ್ಕಿ ಜ್ವರ ಯಾವುದು?

A)  ಎಚ್10ಎನ್5

B)  ಎಚ್8ಎನ್2

C)  ಎಚ್1ಎನ್1

D)  ಎಚ್10ಎನ್3

👉 ಉತ್ತರ: D)  ಎಚ್10ಎನ್3



06)  ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಗೆ ಪ್ರಾಯೋಗಿಕ ಜಿಲ್ಲೆಯಾಗಿ ಆಯ್ಕೆ ಮಾಡಲಾದ ಜಿಲ್ಲೆ ಯಾವುದು?


A)  ರಾಮನಗರ

B)  ವಿಜಯಪುರ

C)  ಹಾವೇರಿ

D)  ದಾವಣಗೆರೆ


👉 ಉತ್ತರ: C)  ಹಾವೇರಿ



07)  ವಿಶ್ವ ಅರೋಗ್ಯ ಸಂಸ್ಥೆಯು ಭಾರತದಲ್ಲಿನ ಕೊರೋನಾ ರೂಪಾಂತರ ವೈರಸ್'ಗೆ ಯಾವ ಹೆಸರನ್ನು ನಿಯೋಜಿಸಿದೆ?


A)  ಆಲ್ಪಾ

B)  ಬೀಟಾ

C)  ಗಾಮಾ

D)  ಡೆಲ್ಟಾ


👉 ಉತ್ತರ: D)  ಡೆಲ್ಟಾ


08)  ಬಾಲ ಸೇವಾ ಯೋಜನೆ ಅಡಿಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ತಿಂಗಳಿಗೆ ಎಷ್ಟು ರೂ. ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ?


A)  1,500 ರೂ.

B)  2,500 ರೂ.

C)  3,500 ರೂ.

D)  5,000 ರೂ.


👉 ಉತ್ತರ: C)  3,500 ರೂ



09)  ಪ್ರಸ್ತುತ ಚೀನಾ ದೇಶವು ಅಲ್ಲಿನ ದಂಪತಿಗಳಿಗೆ ಇನ್ನು ಮುಂದೆ ಎಷ್ಟು ಮಕ್ಕಳನ್ನು ಹೊಂದಲು ಅನುಮತಿಯನ್ನು ನೀಡಿದೆ?


A)  ಒಬ್ಬರು

B)  ಇಬ್ಬರು

C)  ಮೂವರು

D)  ನಾಲ್ವರು


👉 ಉತ್ತರ: C)  ಮೂವರು



10)  ವಿಶ್ವ ಅರೋಗ್ಯ ಸಂಸ್ಥೆಯು ಬ್ರೆಜಿಲ್'ನಲ್ಲಿ 2020 ರ ನವೆಂಬರ್'ನಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರ ವೈರಸ್ ಗೆ ಯಾವ ಹೆಸರನ್ನು ನಿಯೋಜಿಸಿದೆ?


A)  ಬೀಟಾ

B)  ಆಲ್ಪಾ

C)  ಡೆಲ್ಟಾ

D)  ಗಾಮಾ


👉 ಉತ್ತರ: D)  ಗಾಮಾ



11)  ಪ್ರಸ್ತುತ “35 ನೇ ರಾಜ್ಯತ್ವ ದಿನ”ವನ್ನು ಈ ಕೆಳಗಿನ ಯಾವ ರಾಜ್ಯವು ಇತ್ತೀಚಿಗೆ ಆಚರಿಸಿದೆ?


A)  ಹರಿಯಾಣ

B)  ಪಂಜಾಬ್

C)  ಗೋವಾ

D)  ಮಹಾರಾಷ್ಟ್ರ


👉 ಉತ್ತರ: C)  ಗೋವಾ


12)  ಬೆಲ್’ಗ್ರೇಡ್ ಓಪನ್ ಟೆನಿಸ್ ಪ್ರಶಸ್ತಿಯು ನೊವಾಕ್ ಜೊಕೋವಿಕ್ ಅವರ ಟೆನಿಸ್ ಜೀವನದ ಎಷ್ಟನೇ ಎಟಿಪಿ ಪ್ರಶಸ್ತಿ ಇದಾಗಿದೆ?


A)  56 ನೇ ಪ್ರಶಸ್ತಿ

B)  71 ನೇ ಪ್ರಶಸ್ತಿ

C)  83 ನೇ ಪ್ರಶಸ್ತಿ

D)  95 ನೇ ಪ್ರಶಸ್ತಿ


👉 ಉತ್ತರ: C)  83 ನೇ ಪ್ರಶಸ್ತಿ




13)  ಪಾಕಿಸ್ತಾನವು ಯಾವ ರಾಷ್ಟ್ರದ ಸಹಯೋಗದಿಂದ ಸ್ವದೇಶಿ ನಿರ್ಮಿತ “ಪಾಕ್‌ವಾಕ್” ಕೋವಿಡ್-19 ಲಸಿಕೆಯನ್ನು ಬಿಡುಗಡೆ ಮಾಡಿದೆ?


A)  ಚೀನಾ

B)  ಭಾರತ

C)  ಜಪಾನ್

D)  ಇಂಗ್ಲೆಂಡ್


👉 ಉತ್ತರ: A)  ಚೀನಾ


14)  ಯಾವ ರಾಜ್ಯದ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗವು ಏಮ್ಸ್ ನಲ್ಲಿ ಆರಂಭವಾಗಿದೆ?


A)  ಕರ್ನಾಟಕ (ಬೆಂಗಳೂರು)

B)  ಬಿಹಾರ್ (ಪಾಟ್ನಾ)

C)  ಉತ್ತರ ಪ್ರದೇಶ (ಲಕ್ನೋ)

D)  ಮಹಾರಾಷ್ಟ್ರ (ಮುಂಬೈ)


👉 ಉತ್ತರ: B)  ಬಿಹಾರ್ (ಪಾಟ್ನಾ)


15)  ಇತ್ತೀಚಿನ ವಿವಾಧವಾದ ಕೆ.ಎಸ್.ಆರ್.ಟಿ.ಸಿ (KSRTC) ಟ್ರೇಡ್ ಮಾರ್ಕ್ ಯಾವ ರಾಜ್ಯದ ಪಾಲಾಗಿದೆ?


A)  ಕರ್ನಾಟಕ

B)  ತೆಲಂಗಾಣ

C)  ಕೇರಳ

D)  ಮಹಾರಾಷ್ಟ್ರ


👉 ಉತ್ತರ: C)  ಕೇರಳ


16)  ಪ್ರತಿಷ್ಠಿತ “ಗೋಲ್ಡನ್ ಪೀಸ್ ಮೇಕರ್ ಸ್ಟಾರ್” ಪ್ರಶಸ್ತಿಯನ್ನು ಯಾವ ರಾಷ್ಟ್ರವು ನೀಡುತ್ತದೆ?


A)  ಭಾರತ

B)  ರಷ್ಯಾ

C)  ಅಮೇರಿಕ

D)  ಫ್ರಾನ್ಸ್


👉 ಉತ್ತರ: B)  ರಷ್ಯಾ


17)  ಚೀನಾ ದೇಶದ ಸಿನೊವ್ಯಾಕ್ ಲಸಿಕೆಯನ್ನು ಪ್ರಸ್ತುತ ಎಷ್ಟು ರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ?


A)  18 ರಾಷ್ಟ್ರಗಳಲ್ಲಿ

B)  22 ರಾಷ್ಟ್ರಗಳಲ್ಲಿ

C)  25 ರಾಷ್ಟ್ರಗಳಲ್ಲಿ

D)  30 ರಾಷ್ಟ್ರಗಳಲ್ಲಿ


👉 ಉತ್ತರ: B)  22 ರಾಷ್ಟ್ರಗಳಲ್ಲಿ


18)  “ವಿಶ್ವದ ಮೊದಲ ನ್ಯಾನೊ ಯೂರಿಯಾ ಗೊಬ್ಬರ”ವನ್ನು ಈ ಕೆಳಗಿನ ಯಾವ ಕಂಪನಿಯು ಅಭಿವೃದ್ಧಿಪಡಿಸಿದೆ?


A)  ನ್ಯೂಟ್ರಿಗ್

B)  ಗ್ರೀನ್ ಗ್ಲಾಮ್

C)  ನೇಚರ್ ನೆಸ್ಟ್

D)  ಇಫ್ಕೊ


👉 ಉತ್ತರ: D)  ಇಫ್ಕೊ


19)  ಇತ್ತೀಚಿಗೆ ಅಸ್ಸಾಂ ರೈಫಲ್ಸ್ ಮಹಾ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿದ ಲೆಫ್ಟಿನೆಂಟ್ ಜನರಲ್ ಯಾರು?


A)  ಹರಿಂದ್ರ ಸಿಂಗ್

B)  ಮನೋಜ್ ಪಾಂಡೆ

C)  ಬಿಪಿನ್ ರಾವತ್

D)  ಪ್ರದೀಪ್ ಚಂದ್ರನ್ ನಾಯರ್


👉 ಉತ್ತರ: D)  ಪ್ರದೀಪ್ ಚಂದ್ರನ್ ನಾಯರ್


20)  ಪ್ರತಿಷ್ಠಿತ “ಗೋಲ್ಡನ್ ಪೀಸ್ ಮೇಕರ್ ಸ್ಟಾರ್” ಪ್ರಶಸ್ತಿ ಪಡೆದ ಶಾಸಕ ಯಾರು?


A)  ತೇಜಸ್ ಸೂರ್ಯ

B)  ಅಶ್ವಥ ನಾರಾಯಣ್

C)  ಎಸ್.ಆರ್. ವಿಶ್ವನಾಥ್

D)  ಜೆ.ಸಿ. ಮಾಧುಸ್ವಾಮಿ


👉 ಉತ್ತರ: C)  ಎಸ್.ಆರ್. ವಿಶ್ವನಾಥ್



21)  ಭಾರತದಾದ್ಯಂತ ಹಾಳಾಗುವ ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳನ್ನು ಸಾಗಿಸಲು ಗೋ-ಏರ್ಲೈನ್ಸ್ ನೊಂದಿಗೆ ಯಾವ ರಾಜ್ಯ / ಯುಟಿ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿದೆ?


A)  ಕರ್ನಾಟಕ

B)  ನವದೆಹಲಿ

C)  ಆಂಧ್ರ ಪ್ರದೇಶ

D)  ಜಮ್ಮು ಮತ್ತು ಕಾಶ್ಮೀರ


👉 ಉತ್ತರ: D)  ಜಮ್ಮು ಮತ್ತು ಕಾಶ್ಮೀರ


22)  ವಿಶ್ವ ತಂಬಾಕು ರಹಿತ ದಿನದಂದು ಡಬ್ಲ್ಯು.ಎಚ್.ಒ ಯಿಂದ 2021 ರ “ಡಬ್ಲ್ಯು.ಎಚ್.ಒ ಡೈರೆಕ್ಟರ್ ಜನರಲ್ ವಿಶೇಷ ಪ್ರಶಸ್ತಿ” ಪಡೆದವರು ಯಾರು?


A)  ನರೇಂದ್ರ ಮೋದಿ

B)  ಹರ್ಷ ವರ್ಧನ್

C)  ಕುಲದೀಪ್ ನಾರಾಯಣ್

D)  ಬಲರಾಮ್ ಭಾರ್ಗ


👉 ಉತ್ತರ: B)  ಹರ್ಷ ವರ್ಧನ್


23)  ಇತ್ತೀಚೆಗೆ, ಜಗನ್ನಾಥ್ ಬಿದ್ಯಾಧರ್ ಮೋಹಪಾತ್ರ ಅವರನ್ನು ಯಾವ ಸಂಸ್ಥೆಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ?


A)  ಕೇಂದ್ರ ತನಿಖಾ ದಳ

B)  ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ

C)  ರಾಷ್ಟ್ರೀಯ ತನಿಖಾ ಸಂಸ್ಥೆ

D)  ಕೇಂದ್ರೀಯ ನೇರ ತೆರಿಗೆ ಮಂಡಳಿ


👉 ಉತ್ತರ: D)  ಕೇಂದ್ರೀಯ ನೇರ ತೆರಿಗೆ ಮಂಡಳಿ


24)  ಜೂನ್ 2021 ರಲ್ಲಿ ಬ್ರಿಕ್ಸ್ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯನ್ನು ಯಾವ ದೇಶವು ಆಯೋಜಿಸಿತು?


A)  ಭಾರತ

B)  ಚೀನಾ

C)  ದಕ್ಷಿಣ ಆಫ್ರಿಕಾ

D)  ಬ್ರೆಜಿಲ್


👉 ಉತ್ತರ: A)  ಭಾರತ


25)  ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್’ಮೆಂಟ್ (ಒಇಸಿಡಿ) 2021 ರ ಜೂನ್ ನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರ ಎಷ್ಟಿರಲಿದೆ ಎಂದು ಅಂದಾಜು ಮಾಡಿದೆ?


A)  ಶೇಕಡ 8.33

B)  ಶೇಕಡ 9.9

C)  ಶೇಕಡ 11.11

D)  ಶೇಕಡ 12.6


👉 ಉತ್ತರ: B)  ಶೇಕಡ 9.9


26)  ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಯ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡರು?


A)  ಪವನ್ ಮುಂಜಾಲ್

B)  ಉದಯ್ ಕೋಟಕ್

C)  ಟಿವಿ ನರೇಂದ್ರನ್

D)  ಸಂಜೀವ್ ಬಜಾಜ್


👉 ಉತ್ತರ: C)  ಟಿವಿ ನರೇಂದ್ರನ್


27)  ಜೂನ್ 2021 ರಲ್ಲಿ, ಭಾರತ ಸರ್ಕಾರವು ಇ-ಗೋಪಾಲಾ (e-GOPALA) ಆ್ಯಪ್ ಅನ್ನು ಯಾವ ಪ್ಲಾಟ್’ಫಾರ್ಮ್ ನೊಂದಿಗೆ ಸಂಯೋಜಿಸಿದೆ ಹಾಗೂ ಡೈರಿ ವಲಯದ ರಾಷ್ಟ್ರೀಯ ಪ್ರಶಸ್ತಿಗಳಾದ ಗೋಪಾಲ್ ರತ್ನ ಪ್ರಶಸ್ತಿಗಳನ್ನು ಪ್ರಾರಂಭಿಸಿತು?


A)  ಮೈಗೋವ್ (MyGov)

B)  ಇ-ನ್ಯಾಮ್ (e-NAM)

C)  ಡಿಜಿಲಾಕರ್ (Digilocker)

D)  ಉಮಾಂಗ್ (UMANG)


👉 ಉತ್ತರ: D)  ಉಮಾಂಗ್ (UMANG)


28)  ಯಾವ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ Non-Fungible

 Token (NFT) ಮಾರುಕಟ್ಟೆಯನ್ನು ಪ್ರಾರಂಭಿಸಿದೆ?


A)  ಕಾಯಿನ್ ಬೇಸ್ (Coinbase)

B)  ವಾಜಿರ್ ಎಕ್ಸ್ (WazirX)

C)  ಬಯ್ ಯು ಕಾಯಿನ್ (BuyUcoin)

D)  ಯೂನೋ ಕಾಯಿನ್ (Unocoin)


👉 ಉತ್ತರ: B)  ವಾಜಿರ್ ಎಕ್ಸ್ (WazirX)


29)  ಮೈಕ್ರೋಸಾಫ್ಟ್ ಅಜೂರ್ ಅನ್ನು ಬಳಸಿಕೊಂಡು ಗ್ರಾಹಕರ ಬೆಂಬಲವನ್ನು ಬಲಪಡಿಸಲು ಮೈಕ್ರೋಸಾಫ್ಟ್ ನೊಂದಿಗೆ ಯಾವ ಭಾರತೀಯ ವಿಮಾ ಕಂಪನಿ ಪಾಲುದಾರಿಕೆ ಹೊಂದಿದೆ?


A)  ಭಾರತಿ ಆಕ್ಸಾ ಜನರಲ್ ಇನ್ಶುರೆನ್ಸ್ ಕಂಪನಿ

B)  ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ

C)  ಇಫ್ಕೊ ಟೋಕಿಯೊ ಜನರಲ್ ಇನ್ಶುರೆನ್ಸ್ ಕಂಪನಿ

D)  ಮ್ಯಾಕ್ಸ್ ಬುಪಾ ಹೆಲ್ತ್ ಇನ್ಶುರೆನ್ಸ್ ಕಂಪನಿ


👉 ಉತ್ತರ: B)  ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ


30)  ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ (ಐ.ಎನ್.ಸಿ.ಬಿ) ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡ ಮೊದಲ ಭಾರತೀಯ ಯಾರು?


A)  ಜಗ್ಜಿತ್ ಪವಾಡಿಯಾ

B)  ಅರವಿಂದ್ ಕುಮಾರ್

C)  ಜ್ಞಾನ ಸರ್ವರ್

D)  ರಾಕೇಶ್ ಅಸ್ತಾನ


👉 ಉತ್ತರ: A)  ಜಗ್ಜಿತ್ ಪವಾಡಿಯಾ



31)  ಆರ್ಥಿಕ ಆಕರ್ಷಣೆಗಾಗಿ ಮನಮಾ AIRINC ಗ್ಲೋಬಲ್ 150 ನಗರಗಳ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತದ ಕಡೆಯಿಂದ ನವದೆಹಲಿ ಸೂಚ್ಯಂಕದಲ್ಲಿ ಎಷ್ಟನೇ ಸ್ಥಾನದಲ್ಲಿದೆ?


A)  56 ನೇ ಸ್ಥಾನ

B)  89 ನೇ ಸ್ಥಾನ

C)  113 ನೇ ಸ್ಥಾನ

D)  125 ನೇ ಸ್ಥಾನ


👉 ಉತ್ತರ: C)  113 ನೇ ಸ್ಥಾನ


32)  ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್.ಎಚ್.ಆರ್.ಸಿ) ಅಧ್ಯಕ್ಷರಾಗಿ (ಜೂನ್ 2021 ರಲ್ಲಿ) ಯಾರು ನೇಮಕಗೊಂಡಿದ್ದಾರೆ?


A)  ರೋಹಿಂಟನ್ ಫಾಲಿ ನಾರಿಮನ್

B)  ನವೀನ್ ಸಿನ್ಹಾ

C)  ಅರುಣ್ ಕುಮಾರ್ ಮಿಶ್ರಾ

D)  ಉದಯ್ ಲಲಿತ್


👉 ಉತ್ತರ: C)  ಅರುಣ್ ಕುಮಾರ್ ಮಿಶ್ರಾ


33)  “ಸ್ವಿಫ್ಟ್ ಜಿಪಿಐ ತತ್ಕ್ಷಣ” ಎಂದು ಕರೆಯಲ್ಪಡುವ ಗಡಿರೇಖೆಯ ಒಳಗಿನ ಪಾವತಿ ಸೌಲಭ್ಯವನ್ನು ನೀಡಲು ಸ್ವಿಫ್ಟ್ ಜೊತೆ ಪಾಲುದಾರಿಕೆ ಮಾಡಿದ ಏಷ್ಯಾ-ಪೆಸಿಫಿಕ್ ಪ್ರದೇಶದ ಮೊದಲ ಬ್ಯಾಂಕ್ ಯಾವುದು?


A)  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

B)  ಆಕ್ಸಿಸ್ ಬ್ಯಾಂಕ್

C)  ಐಸಿಐಸಿಐ ಬ್ಯಾಂಕ್

D)  ಬ್ಯಾಂಕ್ ಆಫ್ ಬರೋಡಾ


👉 ಉತ್ತರ: C)  ಐಸಿಐಸಿಐ ಬ್ಯಾಂಕ್


34)  “ಜಾಗತಿಕ ಸಾಂಕ್ರಾಮಿಕ ರಾಡಾರ್” ಎಂಬ ಅಂತರರಾಷ್ಟ್ರೀಯ ರೋಗಕಾರಕ ಕಣ್ಗಾವಲು ಜಾಲವನ್ನು ಸ್ಥಾಪಿಸಲು ಯಾವ ದೇಶ / ದೇಶಗಳು ಘೋಷಿಸಿವೆ?


A)  ಭಾರತ

B)  ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ

C)  ಯುರೋಪಿಯನ್ ಯೂನಿಯನ್

D)  ಯುನೈಟೆಡ್ ಕಿಂಗ್ಡಮ್


👉 ಉತ್ತರ: D)  ಯುನೈಟೆಡ್ ಕಿಂಗ್ಡಮ್


35)  ಜೂನ್ 2021 ರಲ್ಲಿ, ಈ ಕೆಳಗಿನ ಯಾರು ಎವರೆಸ್ಟ್ ಶಿಖರವನ್ನು ತಲುಪಿದ ವಿಶ್ವದ ಅತಿ ವೇಗದ ಸ್ತ್ರೀ ಪರ್ವತಾರೋಹಿ ಎನಿಸಿಕೊಂಡಿದ್ದಾರೆ?


A)  ಮೋನಿ ಮುಲೇಪತಿ

B)  ತ್ಸಾಂಗ್ ಯಿನ್-ಹಂಗ್

C)  ಗೌರಿಕಾ ಸಿಂಗ್

D)  ಬಚೇಂದ್ರ ಪಾಲ್


👉 ಉತ್ತರ: B)  ತ್ಸಾಂಗ್ ಯಿನ್-ಹಂಗ್


36)  ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ಯ ಆದಾಯ-ವೆಚ್ಚದ ಮಾಹಿತಿಯ ಪ್ರಕಾರ ಆರ್ಥಿಕ ವರ್ಷ 2021 ಕ್ಕೆ ಭಾರತದ ಹಣಕಾಸಿನ ಕೊರತೆ ಎಷ್ಟಿರಲಿದೆ?


A)  ಶೇಕಡ 6.9

B)  ಶೇಕಡ 7.4

C)  ಶೇಕಡ 8.6

D)  ಶೇಕಡ 9.3


👉 ಉತ್ತರ: D)  ಶೇಕಡ 9.3


37)  ಸ್ಯಾಟಿನ್ ಕ್ರೆಡಿಟ್’ಕೇರ್ ನೆಟ್’ವರ್ಕ್ ನ ಸಹಭಾಗಿತ್ವದಲ್ಲಿ ಎನ್.ಪಿ.ಸಿ.ಐ.ನ ಯುಪಿಐ ಆಟೋಪೇ ಪ್ಲಾಟ್’ಫಾರ್ಮ್ ನೊಂದಿಗೆ ಸಂಯೋಜನೆಗೊಂಡ ಮೊದಲ ಅಂತರರಾಷ್ಟ್ರೀಯ ಬ್ಯಾಂಕ್ ಯಾವುದು?


A)  ಡಿಬಿಎಸ್ ಬ್ಯಾಂಕ್

B)  ಸ್ಟ್ಯಾಂಡರ್ಡ್ ಚಾರ್ಟರ್ಡ್

C)  ಎಚ್.ಎಸ್.ಬಿ.ಸಿ ಬ್ಯಾಂಕ್ ಇಂಡಿಯಾ

D)  ಡಾಯ್ಚ್ ಬ್ಯಾಂಕ್


👉 ಉತ್ತರ: C)  ಎಚ್.ಎಸ್.ಬಿ.ಸಿ ಬ್ಯಾಂಕ್ ಇಂಡಿಯಾ


38)  ಇತ್ತೀಚೆಗೆ (ಜೂನ್ 2021 ರಲ್ಲಿ) ಈ ಕೆಳಗಿನ ಯಾರು ಇಸ್ರೇಲ್ ನ ಅಧ್ಯಕ್ಷರಾಗಿದ್ದಾರೆ?


A)  ಬೆನ್ನಿ ಗ್ಯಾಂಟ್ಜ್

B)  ಮಹಮೂದ್ ಅಬ್ಬಾಸ್

C)  ಐಸಾಕ್ ಹೆರ್ಜಾಗ್

D)  ರ್ಯುವೆನ್ ರಿವ್ಲಿನ್


👉 ಉತ್ತರ: C)  ಐಸಾಕ್ ಹೆರ್ಜಾಗ್


39)  ಈ ಕೆಳಗಿನ ಯಾವ ನಗರದಲ್ಲಿ ನಡೆದ ವಿಶ್ವ ಜೂನಿಯರ್ ವೇಟ್’ಲಿಫ್ಟಿಂಗ್ ಚಾಂಪಿಯನ್’ಶಿಪ್ 2021 ರಲ್ಲಿ ಅಚಿಂಟಾ ಶೌಲಿ ಬೆಳ್ಳಿ ಪದಕ ಗೆದ್ದಿದ್ದಾರೆ?


A)  ಜಕಾರ್ತಾ, ಇಂಡೋನೇಷ್ಯಾ

B)  ತಾಷ್ಕೆಂಟ್, ಉಜ್ಬೇಕಿಸ್ತಾನ್

C)  ಕ್ಯಾನ್ಬೆರಾ, ಆಸ್ಟ್ರೇಲಿಯಾ

D)  ಟೋಕಿಯೊ, ಜಪಾನ್


👉 ಉತ್ತರ: B)  ತಾಷ್ಕೆಂಟ್, ಉಜ್ಬೇಕಿಸ್ತಾನ್


40)  ಹಾಳಾಗುವ ಉತ್ಪನ್ನಗಳ ನೈಜ-ಸಮಯದ ತಾಪಮಾನವನ್ನು ದಾಖಲಿಸಲು “ಅಂಬಿಟ್ಯಾಗ್” ಎಂಬ ಭಾರತದ ಮೊದಲ ಐಒಟಿ ಸಾಧನವನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?


A)  ಐ.ಐ.ಎಸ್.ಸಿ ಬೆಂಗಳೂರು

B)  ಐಐಟಿ ರೋಪರ್

C)  ಎನ್.ಐ.ಟಿ ವಾರಂಗಲ್

D)  ಐಐಟಿ ದೆಹಲಿ


👉 ಉತ್ತರ: B)  ಐಐಟಿ ರೋಪರ್


Previous
« Prev Post

1 comment: