Current affairs may 13, 2021 ಪ್ರಚಲಿತ ಘಟನೆಗಳು
1 week full current affairs Click here
1) ಇತ್ತೀಚಿಗೆ ಪ್ಯಾಲೆಸ್ತೇನ್’ನ ಗಾಜಾ ನಗರದ ಉಗ್ರರ ಮೇಲೆ ರಾಕೇಟ್ ದಾಳಿ ಮಾಡಿದ ದೇಶ ಯಾವುದು?
A) ಫ್ರಾನ್ಸ್
B) ಇಟಲಿ
C) ರಷ್ಯಾ
D) ಇಸ್ರೇಲ್
👉 ಉತ್ತರ: D) ಇಸ್ರೇಲ್
2) “ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ)” ನೀಡುವ “ಗ್ರೀನ್ ಉರ್ಜಾ ಪ್ರಶಸ್ತಿ 2021” ಅನ್ನು ಈ ಕೆಳಗಿನ ಯಾವ ಕಂಪನಿ ಪಡೆದುಕೊಂಡಿದೆ?
A) ಪವರ್ ಫೈನಾನ್ಸ್ ಕಾರ್ಪೊರೇಷನ್
B) ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ
C) ಇಂಡಿಯನ್ ರಿನ್ಯೂಯಬಲ್ ಎನರ್ಜಿ ಡೆಲಪ್’ಮೆಂಟ್ ಏಜೆನ್ಸಿ ಲಿಮಿಟೆಡ್
D) ಎನ್.ಎಚ್.ಪಿ.ಸಿ ಲಿಮಿಟೆಡ್
👉 ಉತ್ತರ: C) ಇಂಡಿಯನ್ ರಿನ್ಯೂಯಬಲ್ ಎನರ್ಜಿ
3) ಪ್ರತಿ ವರ್ಷವು ಯಾವ ದಿನದಂದು ಅಂತರರಾಷ್ಟ್ರೀಯ ದಾದಿಯರ (ನರ್ಸ್) ದಿನವನ್ನು ಆಚರಿಸಲಾಗುತ್ತದೆ?
A) ಮೇ 12
B) ಮೇ 11
C) ಮೇ 10
D) ಮೇ 13
👉 ಉತ್ತರ: A) ಮೇ 12
4) “ವರ್ಲ್ಡ್ ಫುಡ್ ಪ್ರೈಜ಼್” ಪ್ರಶಸ್ತಿ ಪಡೆದ ಏಷ್ಯನ್ ಪರಂಪರೆಯ ಮೊದಲ ಮಹಿಳೆ ಯಾರು?
A) ಶಕುಂತಲಾ ಹರಕ್ಸಿಂಗ್ ಥೈಲ್ಸ್ಟೆಡ್
B) ಲಿಲಿ ಕಾಂಗ್
C) ರೋಶ್ನಿ ನಾಡರ್ ಮಲ್ಹೋತ್ರಾ
D) ಮೆಲಾನಿ ಪರ್ಕಿನ್ಸ್
👉 ಉತ್ತರ: A) ಶಕುಂತಲಾ ಹರಕ್ಸಿಂಗ್ ಥೈಲ್ಸ್ಟೆಡ್
5) ಇತ್ತೀಚೆಗೆ ಯಾವ ರಾಜ್ಯದ ಆರೋಗ್ಯ ಸಚಿವರು 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ “ಐವರ್ಮೆಕ್ಟಿನ್ (ivermectin)” ಬಳಕೆ ಮಾಡುವಂತೆ ಶಿಫಾರಸ್ಸು ಮಾಡಿದೆ?
A) ಕರ್ನಾಟಕ
B) ಮಹಾರಾಷ್ಟ್ರ
C) ಗೋವಾ
D) ಹರಿಯಾಣ
👉 ಉತ್ತರ: C) ಗೋವಾ
6) ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್’ಗೆ ಎಷ್ಟು ಕೋಟಿ ರೂ. ಗಳು ನೀಡಿದೆ?
A) 2125 ಕೋಟಿ ರೂ.ಗಳು
B) 2250 ಕೋಟಿ ರೂ.ಗಳು
C) 2500 ಕೋಟಿ ರೂ.ಗಳು
D) 2750 ಕೋಟಿ ರೂ.ಗಳು
👉 ಉತ್ತರ: B) 2250 ಕೋಟಿ ರೂ.ಗಳು
7) ಇತ್ತೀಚಿಗೆ ಪ್ರಧಾನಿ ಮೋದಿ ಅವರು ಯಾವ ದೇಶದ ಜಿ7 ಶೃಂಗಸಭೆಯ ಪ್ರವಾಸ ರದ್ದು ಮಾಡಿದ್ದಾರೆ?
A) ಚೀನಾ
B) ಬ್ರಿಟನ್
C) ಭೂತಾನ್
D) ಬಾಂಗ್ಲಾದೇಶ
👉 ಉತ್ತರ: B) ಬ್ರಿಟನ್
8) ಯಾವ ಕ್ಷುದ್ರಗ್ರಹದಿಂದ ಶಿಲಾ ಮಾದರಿಗಳನ್ನು ಸಂಗ್ರಹಿಸಿದ ನಾಸಾದ ಒಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆ 2023 ರ ವೇಳೆಗೆ ಭೂಮಿಗೆ ಮರಳುತ್ತದೆ?
A) ಇರೋಸ್ (Eros)
B) ಬೆನ್ನು (Bennu)
C) ಅಪೋಫಿಸ್ (Apophis)
D) ವೆಸ್ಟಾ (Vesta)
👉 ಉತ್ತರ: B) ಬೆನ್ನು (Bennu)
9) ಮೇ 2021 ರಲ್ಲಿ ನಿಧನರಾದ ಅರ್ಜುನ ಪ್ರಶಸ್ತಿ ಪುರಸ್ಕೃತ ಟೇಬಲ್ ಟೆನಿಸ್ ಆಟಗಾರ ವೇಣುಗೋಪಾಲ್ ಚಂದ್ರಶೇಖರ್ ಅವರ ಆತ್ಮಚರಿತ್ರೆ ಯಾವುದು?
A) Playing to Win
B) One Life is Not Enough
C) My fightback from Death’s Door
D) Ace Against Odds
👉 ಉತ್ತರ: C) My fightback from Death’s Door
10) 2021 ರಲ್ಲಿ, ಬೇಸಿಗೆ ಬೆಳೆಗಳ ಕೃಷಿ ಪ್ರದೇಶವು 2020 ಕ್ಕೆ ಹೋಲಿಸಿದರೆ ಶೇಕಡ 21.58 ರಷ್ಟು ಹೆಚ್ಚಾಗಿದೆ. ಈ ಬದಲಾವಣೆಯ ಹಿಂದಿನ ಪ್ರಮುಖ ಕಾರಣವೇನು?
A) ಉತ್ಪಾದನೆಗಳ ಹೆಚ್ಚಿನ ದೇಶೀಯ ಬಳಕೆ, ಕೋವಿಡ್-19 ನೊಂದಿಗೆ ಸಂಬಂಧ ಹೊಂದಿದೆ
B) ಕೋವಿಡ್-19 ರ ಕಾರಣದಿಂದಾಗಿ ಕೃಷಿಯಲ್ಲಿ ಹೆಚ್ಚಿನ ಉದ್ಯೋಗಿಗಳು ಸೇರಿದ್ದಾರೆ
C) ಕೃಷಿ ರಫ್ತು ಹೆಚ್ಚಳ
D) ದ್ವಿದಳ ಧಾನ್ಯಗಳ ಕೃಷಿ ಪ್ರದೇಶದಲ್ಲಿನ ಹೆಚ್ಚಳ
👉 ಉತ್ತರ: D) ದ್ವಿದಳ ಧಾನ್ಯಗಳ ಕೃಷಿ ಪ್ರದೇಶದಲ್ಲಿನ ಹೆಚ್ಚಳ
No comments:
Post a Comment