Current affairs may 07 , 2021 ಪ್ರಚಲಿತ ಘಟನೆಗಳು

Posted by Vidhyarthimitra on

 Current affairs may 07 , 2021 ಪ್ರಚಲಿತ ಘಟನೆಗಳು



1)  ಭಾರತದ ಮೊಟ್ಟಮೊದಲ ವಿದ್ಯುತ್ ಟ್ರಾಕ್ಟರ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ ಕೇಂದ್ರ ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆ ಎಲ್ಲಿದೆ?

A)  ಬೀದರ್, ಕರ್ನಾಟಕ

B)  ಕರ್ನಾಲ್, ಹರಿಯಾಣ

C)  ಬುಡ್ನಿ, ಮಧ್ಯಪ್ರದೇಶ

D)  ಕೊಯಮತ್ತೂರು, ತಮಿಳುನಾಡು


👉 ಉತ್ತರ: C)  ಬುಡ್ನಿ, ಮಧ್ಯಪ್ರದೇಶ


2)  ತನ್ನ ಮೊಬೈಲ್ ಅಪ್ಲಿಕೇಶನ್ನಲ್ಲಿ “ಲಸಿಕೆ ಶೋಧಕ ಸಾಧನ (Vaccine Finder Tool)” ಪ್ರಾರಂಭಿಸಲು ಭಾರತೀಯ ಸರ್ಕಾರದೊಂದಿಗೆ ಯಾವ ಸಂಸ್ಥೆ ಪಾಲುದಾರಿಕೆ ಹೊಂದಿದೆ?

A)  ಫೇಸ್’ಬುಕ್

B)  ಗೂಗಲ್

C)  ಫ್ಲಿಪ್’ಕಾರ್ಟ್

D)  ಅಮೆಜಾನ್


👉 ಉತ್ತರ: A)  ಫೇಸ್’ಬುಕ್


3)  ಇತ್ತೀಚಿನ ವರದಿ ಪ್ರಕಾರ ಭಾರತ ಕ್ರಿಕೆಟ್ ತಂಡವು ಏಕದಿನ ರ್ಯಾಂ ಕಿಂಗ್'ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?

A)  ಮೊದಲನೇ ಸ್ಥಾನ

B)  ಎರಡನೇ ಸ್ಥಾನ

C)  ಮೂರನೇ ಸ್ಥಾನ

D)  ನಾಲ್ಕನೇ ಸ್ಥಾನ


👉 ಉತ್ತರ: C)  ಮೂರನೇ ಸ್ಥಾನ


4)  ವಿವಿಧ ರಾಜ್ಯಗಳ 581 ತಾಣಗಳಲ್ಲಿ ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ವೈದ್ಯಕೀಯ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಯಾವ ಸಚಿವಾಲಯ ಮೇ 2021 ರಲ್ಲಿ ಘೋಷಿಸಿತು?

A)  ರೈಲ್ವೆ ಸಚಿವಾಲಯ

B)  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

C)  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

D)  ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ


👉 ಉತ್ತರ: B)  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ


5)  ಮೇ 2021 ರಂತೆ ರಾಜ್ಯ ಸರ್ಕಾರದ ತ್ರೈಮಾಸಿಕ ಆಧಾರದ ಮೇಲೆ ಆರ್.ಬಿ.ಐ. ನ ಪರಿಷ್ಕೃತ ಗರಿಷ್ಠ ಓವರ್’ಡ್ರಾಫ್ಟ್ ಅವಧಿ ಎಷ್ಟು?

A)  14 ದಿನಗಳು

B)  21 ದಿನಗಳು

C)  36 ದಿನಗಳು

D)  50 ದಿನಗಳು


👉 ಉತ್ತರ: D)  50 ದಿನಗಳು


6)  ಜಾಗತಿಕವಾಗಿ, “ಇನ್ಶುರೆನ್ಸ್ 100” 2021ರ ವರದಿಯ ಪ್ರಕಾರ ಎಲ್.ಐ.ಸಿ. 10ನೇ ಅತ್ಯಂತ ಮೌಲ್ಯಯುತ ವಿಮಾ ಬ್ರಾಂಡ್ ಮತ್ತು ಎಷ್ಟನೇ ಪ್ರಬಲ ಬ್ರಾಂಡ್ ಆಗಿದೆ?

A)  ಮೊದಲನೇ ಪ್ರಬಲ ಬ್ರಾಂಡ್

B)  ಎರಡನೇ ಪ್ರಬಲ ಬ್ರಾಂಡ್

C)  ಮೂರನೇ ಪ್ರಬಲ ಬ್ರಾಂಡ್

D)  ನಾಲ್ಕನೇ ಪ್ರಬಲ ಬ್ರಾಂಡ್


👉 ಉತ್ತರ: C)  ಮೂರನೇ ಪ್ರಬಲ ಬ್ರಾಂಡ್


7)  ಯುರೇನಿಯಂ-214 ಎಂಬ ಯುರೇನಿಯಂ ಐಸೊಟೋಪ್ ನ ಹಗುರವಾದ ರೂಪವನ್ನು ಅಭಿವೃದ್ಧಿಪಡಿಸಿದ ದೇಶ ಯಾವುದು?

A)  ಭಾರತ

B)  ಚೀನಾ

C)  ಅಮೇರಿಕ

D)  ರಷ್ಯಾ


👉 ಉತ್ತರ: B)  ಚೀನಾ


8)  2030 ರ ವೇಳೆಗೆ ಡೀಸೆಲ್ನಲ್ಲಿ ಶೇಕಡ ಎಷ್ಟರಷ್ಟು ಜೈವಿಕ ಡೀಸೆಲ್ ಅನ್ನು ಬೆರೆಸುವ ಭಾರತದ ಗುರಿಯನ್ನು ಸಾಧಿಸಲು ಭಾರತದ ಮೊಟ್ಟಮೊದಲ ಯುಕೊ (ಉಪಯೋಗಿಸಿದ ಅಡುಗೆ ತೈಲ) ಆಧಾರಿತ ಜೈವಿಕ ಡೀಸೆಲ್ ಮಿಶ್ರಿತ ಡೀಸೆಲ್ ಅನ್ನು ದೆಹಲಿಯ ಇಂಡಿಯನ್ ಆಯಿಲ್ ತಯಾರಿಸಿದೆ?

A)  ಶೇಕಡ 5 ರಷ್ಟು

B)  ಶೇಕಡ 15 ರಷ್ಟು

C)  ಶೇಕಡ 25 ರಷ್ಟು

D)  ಶೇಕಡ 45 ರಷ್ಟು


👉 ಉತ್ತರ: A)  ಶೇಕಡ 5 ರಷ್ಟು



9)  ಮೇ 4ರ ಮಂಗಳವಾರದಂದು ಜಗತ್ತಿನಾದ್ಯಂತ ಆಚರಿಸಲಾಗುವ 2021ರ “ವಿಶ್ವ ಆಸ್ತಮಾ ದಿನ”ದ ವಿಷಯವೇನು (ಥೀಮ್)?

A)  STOP for Asthma

B)  You Can Control Your Asthma

C)  Enough Asthma Deaths

D)  Uncovering Asthma Misconceptions


👉 ಉತ್ತರ: D)  Uncovering Asthma Misconceptions


10)  ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನಕ್ಕೆ ನೇಮಕಗೊಳ್ಳುತ್ತಿರುವ ಭಾರತೀಯ ರಾಯಭಾರಿ ಯಾರು?

A)  ಅಜಯ್ ಠಾಕೂರ

B)  ಪಿ. ವಿ. ಸಿಂಧು

C)  ಕರಣಂ ಮಲ್ಲೇಶ್ವರಿ

D)  ದಿಲೀಪ್ ಸಿಂಗ್


👉 ಉತ್ತರ: B)  ಪಿ. ವಿ. ಸಿಂಧು

Previous
« Prev Post

1 comment:

  1. How to get pdf file for all daily current question and answer.

    ReplyDelete